ದಕ್ಷಯಜ್ಞ : ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ ಬೆಂಗಳೂರು ಇವರ ಪ್ರಸ್ತುತಿ.

2016 ж. 5 Нау.
4 962 Рет қаралды

ಶನಿವಾರ (5Mar2016)ಸಂಜೆ ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೇಂದ್ರಕಚೇರಿಯಲ್ಲಿ ಅಲ್ಲಿನ ಕನ್ನಡ ಬಳಗದ ಆಶ್ರಯದಲ್ಲಿ ಯಕ್ಷಗಾನ ಪ್ರದರ್ಶನ ಇತ್ತು. ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ, ಬೆಂಗಳೂರು- ಈ ತಂಡವು ’ದಕ್ಷಯಜ್ಞ’ ಪ್ರಸಂಗವನ್ನು ಅಮೋಘ ರೀತಿಯಲ್ಲಿ ಪ್ರದರ್ಶಿಸಿತು. ಹಿಮ್ಮೇಳದಲ್ಲಿ ಮಾತ್ರ ಪುರುಷ ಕಲಾವಿದರು. ಮುಮ್ಮೇಳದ ಎಲ್ಲ ಪಾತ್ರಗಳೂ ಮಹಿಳೆಯರಿಂದಲೇ ನಿರ್ವಹಣೆ. ದಾಕ್ಷಾಯಿಣಿಯಾಗಿ ಶುಭಾ ಗೋರೆ, ದಕ್ಷನಾಗಿ ಪೂನಂ ಗೋಖಲೆ, ಈಶ್ವರನಾಗಿ ಅನುಪಮಾ ಮರಾಠೆ, ವೀರಭದ್ರನಾಗಿ ನಯನಾ ಭಿಡೆ, ಬೃಹಸ್ಪತಿಯಾಗಿ ಶೈಲಜಾ ಜೋಶಿ, ದೇವೇಂದ್ರನಾಗಿ ಚಿತ್ರಾ ಖಾಡಿಲ್ಕರ್... ಎಲ್ಲರದೂ ಬಹಳ ಅಚ್ಚುಕಟ್ಟಾದ ಅಭಿನಯ, ಸೊಗಸಾದ ಸಂಭಾಷಣೆ, ನವಿರಾದ ನೃತ್ಯ. ವೃತ್ತಿಪರ ಕಲಾವಿದರಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲದಂತೆ ಉತ್ಕೃಷ್ಟ ಮಟ್ಟದಲ್ಲಿ ಪ್ರದರ್ಶನ ನಡೆಯಿತು. ಎರಡು ಗಂಟೆಗಳ ಕಾಲ ಪ್ರೇಕ್ಷಕರೆಲ್ಲರ ಕಣ್ಮನ ತಣಿಸಿತು.

KZhead